ಕೇಶವಮೂರ್ತಿ ಅವರ `ಗಾಂಧಿ ಸೀಟು` ಪುಸ್ತಕವನ್ನು ಪ್ರಕಾಶ್ ರೈ ಬಿಡುಗಡೆ ಮಾಡಲಿದ್ದಾರೆ
Posted date: 15 Sun, Dec 2013 – 07:26:43 PM

ಕಳೆದ ಹಲವು ವರ್ಷಗಳಿಂದ ಸಿನಿಮಾ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡಿರುವ ಸದ್ಯ ಕನ್ನಡಪ್ರಭ ಪತ್ರಿಕೆಯಲ್ಲಿ ಸಿನಿಮಾ ವಿಭಾಗದಲ್ಲಿ ಹಿರಿಯ ಉಪಸಂಪಾದಕನಾಗಿ ಕೆಲಸ ಮಾಡುತ್ತಿರುವ ಆರ್. ಕೇಶವಮೂರ್ತಿ ಅವರು ಅಪರೂಪ ಎನಿಸಿ ಜಗತ್ತಿನ ಸಿನಿಮಾಗಳನ್ನು ಒಳಗೊಂಡ `ಗಾಂಧಿ ಸೀಟು` ಎನ್ನುವ ಪುಸ್ತಕವನ್ನು ಹೊರ ತರುತ್ತಿದ್ದಾರೆ. ಕೆಲವು ವರ್ಷಗಳಿಂದ ಕನ್ನಡಪ್ರಭದ ಸಾಪ್ತಾಹಿಕ ಪುರವಣಿಯಲ್ಲಿ `ಗಾಂಧಿ ಸೀಟು` ಎನ್ನುವ ಹೆಸರಿನಲ್ಲಿ ದೇಶ, ವಿದೇಶ ಸಿನಿಮಾಗಳ ಕುರಿತು ಭಿನ್ನ ನೋಟದಲ್ಲಿ ವಿಶ್ಲೇಷಣೆ ಮಾಡುತ್ತಿದ್ದರು. ಈಗ ಅವರ ಅಂಕಣ ಬರಹಳನ್ನು ನಿರಂತರ ಪ್ರಕಾಶನ ಪುಸ್ತಕ ರೂಪದಲ್ಲಿ ಹೊರತಂದಿದೆ. 200 ಪುಟಗಳ `ಗಾಂಧಿ ಸೀಟು` ಕೃತಿ ಪತ್ರಕರ್ತ ಹಾಗೂ ಲೇಖಕ ಆರ್. ಕೇಶವಮೂರ್ತಿ ಅವರ ಎರಡನೇ ಪುಸ್ತಕ. ಈಗಾಗಲೇ ಹಿರಿಯ ನಟ ದಿ. ಬಾಲಕೃಷ್ಣ ಅವರ ಜೀವನ ಚರಿತ್ರೆಯನ್ನು ಒಳಗೊಂಡ `ಕಲಾಭಿಮಾನಿ ಬಾಲಣ್ಣ` ಎನ್ನುವ ಪುಸ್ತಕ ಬರೆದಿದ್ದಾರೆ. `ಗಾಂಧಿ ಸೀಟು` ಅವರ ಎರಡನೇ ಪ್ರಯತ್ನ.

ವಿಶೇಷ ಅಂದರೆ ಕೇಶವಮೂರ್ತಿ ಅವರಂಥ ಹೊಸ ಪ್ರತಿಭೆಯ ಪುಸ್ತಕ ಬಿಡುಗಡೆ ಮಾಡಲು ಖ್ಯಾತ ಬಹುಭಾಷಾ ನಟ ಪ್ರಕಾಶ್ ರೈ ಅವರು ಬರುತ್ತಿರುವುದು. ರೈ ಅವರು ಪುಸ್ತಕ ಬಿಡುಗಡೆಗೆ ಬರುತ್ತಿರುವುದು `ಗಾಂಧಿ ಸೀಟು` ಕೃತಿಯ ಮಹತ್ವವನ್ನು ಹೆಚ್ಚಿಸಿರುವುದು ಮಾತ್ರವಲ್ಲ, ಪ್ರತಿಭಾವಂತ ಕೇಶವಮೂರ್ತಿ ಅವರ ಬರವಣಿಗೆಯ ಕೃಷಿ ಉತ್ಸಾಗ ತುಂಬಿದಂತೆ ಆಗಿದೆ. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಎಲ್ಲ ಸಿದ್ಧತೆಗಳು ನಡೆಯುತ್ತಿವೆ. ಇದೇ ತಿಂಗಳು 22ರಂದು ಬೆಳಿಗ್ಗೆ 10.30ಕ್ಕೆ ಶಿವಾನಂದ ಸರ್ಕಲ್ ಬಳಿ ಇರುವ ಚಿತ್ರಕಲಾ ಪರಿಷತ್ನಲ್ಲಿ `ಗಾಂಧಿ ಸೀಟು` ಪುಸ್ತಕ ಬಿಡುಗಡೆ ನಡೆಯಲಿದೆ. ಖ್ಯಾತ ಚಲನಚಿತ್ರ ನಟ ಮತ್ತು ನಿರ್ದೇಶಕ ಪ್ರಕಾಶ್ ರೈ ಬುಕ್ ಬಿಡುಗಡೆ ಮಾಡಿದರೆ, ಚಿತ್ರ ನಿರ್ದೇಶಕ ಹಾಗೂ ಸಾಹಿತಿ ಬರಗೂರು ರಾಮಚಂದ್ರಪ್ಪ ಹಾಗೂ ಕನ್ನಡಪ್ರಭ ಪತ್ರಿಕೆಯ ಪುರವಣಿ ಸಂಪಾದಕರಾದ ರಾಧಾಕೃಷ್ಣ ಎಸ್. ಭಡ್ತಿ ಅವರು ಪುಸ್ತಕದ ಕುರಿತು ಮಾತನಾಡಲಿದ್ದಾರೆ.

ಜಗತ್ತಿನ ಅಪರೂಪ ಕ್ಲಾಸಿಕ್ ಸಿನಿಮಾಗಳ ವಿಶೇಷತೆ, ವಿಶ್ಲೇಷಣೆ, ಕುತೂಹಲ ಅಂಶಗಳ ಒಟ್ಟು ರೂಪ `ಗಾಂಧಿ ಸೀಟು`. ಪುಸ್ತಕ ಬಿಡುಗಡೆ ಕಾರ್ಯಕ್ರಮಕ್ಕೆ ಸಿನಿಮಾಸಕ್ತರು, ಸಾಹಿತಿಗಳು, ಯುವ ಬರಹಗಾರರು ಭಾಗಿಯಾಗಿ ಪ್ರತಿಭಾವಂತ ಬರಹಗಾರ ಆರ್.ಕೇಶವಮೂರ್ತಿ ಅವರ ಬರವಣಿಗೆ ಕೃಷಿಯನ್ನು ಪ್ರೋತ್ಸಾಹಿಸಿ.

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed